Gururaj hoskote biography of michaels

ಸದಸ್ಯ:GURURAJ HOSKOTE

ಶ್ರೀ ಗುರುರಾಜ್ ಹೊಸಕೋಟೆ

(ಜನನ) ಕರ್ನಾಟಕದ ಬಾಗಲಕೋಟ ಜಿಲ್ಲೆ ಮುಧೋಳ್ ತಾಲ್ಲೂಕು ಮಹಾಲಿಂಗಪುರದಲ್ಲಿ 1948ನೇ ವರ್ಷ ಮೇ ತಿಂಗಳು 26ನೇ ತಾರೀಕಿನಂದು ಗುರುವಿನ ಶೆಟ್ಟಿ ನೇಕಾರ ಕುಟುಂಬದ 9 ಮಕ್ಕಳ ಬಡ ತಂದೆ ಮಹಾನ್ ದೈವಭಕ್ತ ಹರಿಕಥ ವಿದ್ವಾನ್ ರುದ್ರಪ್ಪ ಹೊಸಕೋಟೆ ಯವರ 8ನೇ ಪುತ್ರನಾಗಿ ಜನಿಸಿದರು.

ವಿದ್ಯಾಬ್ಯಾಸ.

ಇವರು ಮಹಾಲಿಂಗಪುರದಲ್ಲಿ 10ನೇ ತರಗತಿಯವರೆಗೂ, ಪಿಯುಸಿಯನ್ನು ಮುಧೋಳು ಆರ್ ಎಂ ಜಿ  ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು.

ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಸೇವೆ:  1970 ರಿಂದ 1982ರ ವರೆಗೆ ಸೋಮಯ್ಯ ಸಕ್ಕರೆ ಕಾರ್ಖಾನೆ ಅಂದು ಮೊದಲ ಬಿಜಾಪುರದಲ್ಲಿ ಇದ್ದು ಇಂದು ಬಾಗಲಕೋಟೆ ಜಿಲ್ಲೆಯಲ್ಲಿದೆ ಈ ಕಾರ್ಖಾನೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವುದು ಜೊತೆಗೆ  ಒಬ್ಬ ಕಲಾವಿದನಾಗಿ ಬೆಳೆಯಬೇಕೆಂಬ ಆಸೆ ಇದ್ದ ಕಾರಣ ಸಕ್ಕರೆ  ಕಾರ್ಖಾನೆಗೆ ರಾಜೀನಾಮೆ ಇಟ್ಟು 1983 ರಲ್ಲಿ ಬೆಂಗಳೂರಿನ ಮಡಿಲಿಗೆ ಬಿದ್ದ ನಂತರ ಇವರ ಕಲಾ ಬದುಕು ಬದಲಾಯಿತು.


ಸಾಹಿತ್ಯ ಕ್ಷೇತ್ರ.

ಉತ್ತರ ಕರ್ನಾಟಕದ ಜನಪ್ರಿಯ ಗೀತೆ ಸ್ನೇಹಜೀವಿ ಕೈಬೀಸಿ ಕರೆದಾವ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ ಜನತೆಗೆ ಸೊಕ್ಕ ತಂದ ಸೋಲು ಸುಂಸುಮ್ನೆ ಅದ್ ಏನ್ ಕೇಳ್ತಿ, ಹೇಳಕ್ಕಾಗೋದಿಲ್ಲ ಎಂಬ ನಾಲ್ಕು ನಾಲ್ಕು ನಾಟಕಗಳನ್ನು ಸ್ವತಹ ರಚಿಸಿ ನೂರಾರು ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಕಲಿನಲಿ ಎಂಬ ಧ್ಯಯ ಮುಂದಿಟ್ಟುಕೊಂಡು ಶಾಲಾ ಮಕ್ಕಳಿಗಾಗಿ ಪಠ್ಯಪುಸ್ತಕಗಳಲ್ಲಿನ ಪದ್ಯಗಳಿಗೆ ರಾಗ ಸಂಯೋಜಿಸಿ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗಾಗಿ ಸುಮಾರು 35,000 ಮಕ್ಕಳಿಗೆ ಉಚಿತ ಧ್ವನಿಸುರಳಿ ನೀಡಿದ್ದಾರೆ ಇವರ ಸಾಹಿತ್ಯ ಸೇವೆ ಜನಪ್ರಿಯತೆ ಸರಕಾರವು 1983 ರಲ್ಲಿ ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಗೌರವ ಸದಸ್ಯತ್ವ ಸ್ಥಾನ ನೀಡಿ ಗೌರವಿಸಿತ್ತು.


88 ಚಿತ್ರಗಳಿಗೆ ಹಿನ್ನೆಲೆ ಗಾಯಕ:  ಆರಂಭದಲ್ಲಿ ಇವರು ಜಾನಪದ ಶ್ರೀಕಂಠಕ್ಕೆ ಮಾರುಹೋದ ಸಿನಿರಂಗ ಹಿನ್ನೆಲೆ ಗಾಯನಕ್ಕೆ ಅವಕಾಶ ನೀಡಿತು ಅಂದಿನ ಖ್ಯಾತ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಸಂಕೇತ ನಿರ್ದೇಶನದಲ್ಲಿ ಉತ್ತರ ಕರ್ನಾಟಕದ ಕಥೆ ಭಾಷಾ ಆಧಾರಿತ ಸಂಗ್ಯಾ ಬಾಳ್ಯಾ ಇವರು ಹಿನ್ನೆಲೆ ಗಾಯನದ ಪ್ರಥಮ ಚಿತ್ರ ಎರಡನೆಯ ಚಿತ್ರ ಮಹಾಕ್ಷತ್ರಿಯದಲ್ಲಿ ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಗುರುರಾಜ್ ಹೊಸಕೋಟೆ ಹಾಡಿದ ಹಾಡು ಕರ್ನಾಟಕದ್ಯಂತ ಜನಪ್ರಿಯತೆ ಗಳಿಸಿತು ನಂತರ ತವರಿನ ತೊಟ್ಟಿಲು ದಾಸ ಕರಿಯ ಜೋಗಿ ಸಂತ ರಾಮ ಶಾಮ ಭಾಮ ಸುಂಟರಗಾಳಿ ಅಶೋಕ ಗುಲಾಮ ಪಟ್ಟಿ ಆದ್ರೆ 18ನೇ ಕ್ರಾಸು ಪಿಯುಸಿ ಯೋಗಿ ದ್ಯಾವ್ರೆ ಸೇರಿದಂತೆ ಸುಮಾರು 88 ಚಿತ್ರಗಳಿಗೆ ಹಿನ್ನೆಲೆ ಗಾಯಕ ರಾಗಿ ಜನಪ್ರಿಯತೆ ಗಳಿಸಿದ್ದಾರೆ.

132 ಚಿತ್ರಗಳಲ್ಲಿ ಅಭಿನಯ: 25ರಲ್ಲಿ ಡಾಕ್ಟರ್ ಶಿವರಾಜ್ ಕುಮಾರ್ ಅಭಿನಯದ ಜೋಗಿ ಚಿತ್ರದಲ್ಲಿನ ಚಹಾ ಅಂಗಡಿ ಚಾಚಾ ನ ಪಾತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದ ಇವರು ತವರಿನ ಸಿರಿ ಜೋಗಯ್ಯ ಹನಿಮೂನ್ ಎಕ್ಸ್ಪ್ರೆಸ್ ಮುಂಬೈ ಶಿವಲಿಂಗ ಐರಾವತ ಬಹದ್ದೂರ್ ಮುನಿಯ ಕೃಷ್ಣ ತುಳಸಿ ಪರೋಡಿ ಬನ್ನಿ ಬ್ರಾಂಡ್ ಸ್ನೇಹ ಪರ್ವ ಮೇಘವೇ ಮೇಘವೇ ಕೋಳಿಕೆ ರಂಗಸಮುದ್ರ ಅವತಾರ ಪುರುಷ ಸೇರಿದಂತೆ ಸುಮಾರು 132 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ಜನಪದ ಉಳಿವಿಗಾಗಿ ರಜತಾ ಕಲಾ ಕುಟೀರ ಸಂಸ್ಥೆ ಅನಾವರಣ: ಯುವ ಕಲಾವಿದರಿಗೆ ನೆರವಾಗಲೆಂದು ಒಂದು ತಂಡವನ್ನು ರಚಿಸಿ ರಜತ ಕಲಾ ಕುಟೀರ ಸಂಸ್ಥೆಯಿಂದ ಸರಕಾರದ ಯಾವುದೇ ಸಹಾಯವಿಲ್ಲದೆ ಸ್ವಂತ ದುಡಿಮೆಯ ಹಣದಿಂದ ಬೆಂಗಳೂರಿನಲ್ಲಿ  ಕಳೆದ ಆರು ವರ್ಷಗಳ ಹಿಂದೆ ರಜತ್ ಕಾಲ ಕುಟೀರ ಸಂಸ್ಥೆ ಎಂಬ ರಂಗ ಶಾಲೆ ಆರಂಭಿಸಿ ಉತ್ತರ ಕರ್ನಾಟಕದ ಯುವ ಕಲಾವಿದರಿಗೆ ಸಾಹಿತ್ಯ ರಚನೆ, ಹಾಡು ಗಾರಿಕೆ, ರಂಗಭೂಮಿ ಅಭಿನಯ, ಸಂಗೀತ, ಸೇರಿದಂತೆ ಹಲವಾರು ವಿಷಯಗಳ ಕುರಿತು ಉಚಿತವಾಗಿ ತರಬೇತಿ ನೀಡುತ್ತ ಸಂಸ್ಥೆ ವತಿಯಿಂದ ಜನಪದ ಜೇಂಕಾರ  ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಜನಪದ ಉಳಿಸಿ ಜನಪದ ಬೆಳೆಸಿ ಎಂಬ ಸಂದೇಶ ಸಾರಿದ ಕೀರ್ತಿ ಇವರದು.


ನೂರಾರು ಪ್ರಶಸ್ತಿಗಳ ಪುರಸ್ಕಾರ:  ಇವರ ಅತ್ಯುತ್ತಮ ಜನಪ್ರಿಯ ಸಾಧನೆಗಳನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ನೇತಾಜಿ ಪ್ರಶಸ್ತಿ, ಮಾನವ ಪ್ರಶಸ್ತಿ, ಬೆಂಗಳೂರು ರತ್ನ, ಜನಪದ ಕಲಾ ನಿಧಿ, ಜನಪದ ಗಾಯಕರತ್ನ, ಜನಪದ ಗಾನಸಿರಿ, ಜನಪದ ಕೋಗಿಲೆ, ಜನಪದ ಸಾರ್ವಭೌಮ,  ಇನ್ನೂ ಅನೇಕ ಹೆಸರಾಂತ ಸಂಘ-ಸಂಸ್ಥೆಗಳು ನೂರಾರು ಪ್ರಶಸ್ತಿಗಳನ್ನು ನೀಡಿ  ಗೌರವಿಸಿದ್ದಾರೆ.